ದಿನಾಂಕ 2/6 /25ರಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜೆಎಸ್ಎಸ್ ವಿದ್ಯಾ ಗಿರಿ ಸಂಸ್ಥೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದ್ದರು. ಈ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ಮಕ್ಕಳು ಭಾಗವಹಿಸಿದ್ದರು . ಮಕ್ಕಳು ಬಹಳ ಖುಷಿಯಿಂದ ಪಾಲ್ಗೊಂಡಿದ್ದರು.
ಪಾಲಕರ ಹಬ್ಬ ಮುಗಿದರೂ ಅದರ ಸವಿನೆನಪು ಉಳಿದಿದೆ.ಕಾರ್ಯಕ್ರಮದ ಯಶಸ್ಸಿಗೆ ತಾವೆಲ್ಲ ಕಾರಣರು. ಎಲ್ಲರಿಗೂ ವಂದನೆಗಳು
ಪಾಲಕರ ಹಬ್ಬ ಮುಗಿದರೂ ಅದರ ಸವಿನೆನಪು ಉಳಿದಿದೆ.ಕಾರ್ಯಕ್ರಮದ ಯಶಸ್ಸಿಗೆ ತಾವೆಲ್ಲ ಕಾರಣರು. ಎಲ್ಲರಿಗೂ ವಂದನೆಗಳು
ಒಂದು ಸಂತೋಷದ ವಿಷಯ!!!! ಚಿನ್ನ ರ ಚಿಲಿಪಿಲಿ ನಾಟಕೋತ್ಸವದಲ್ಲಿ ನಮ್ಮ ಶಾಲೆಯ ಎಂಟನೇ ತರಗತಿ ಮಕ್ಕಳಿಗೆ "ಒಗಟಿನ ರಾಣಿ" ನಾಟಕವನ್ನು ಪ್ರದರ್ಶನ ಮಾಡಲು ಅವಕಾಶ ಸಿಕ್ಕಿದೆ.
ಮತ್ತು ಸಂಗೀತ ಮೌಶಿ ದಿನಾಂಕ 15/09/2024 ರಂದು 8ನೇ ತರಗತಿಯ ಮಕ್ಕಳನ್ನು ಹೊರ ಸಂಚಾರಕ್ಕೆಂದು ಗದಗ ಮತ್ತು ಲಕ್ಕುಂಡಿಗೆ ಕರೆದುಕೊಂಡು ಹೋಗಿದ್ದೆವು. ಶಾಲೆಯಿಂದ 7 ಗಂಟೆಗೆ ಬಿಟ್ಟು ಮೊದಲು ಅಮೃತೇಶ್ವರ ದೇವಸ್ಥಾನಕ್ಕೆ ಹೋಗಿ, ಅಲ್ಲಿ ದೇವರ ದರ್ಶನ ಪಡೆದುಕೊಂಡು.ಅಲ್ಲಿಂದ ಲಕ್ಕುಂಡಿಗೆ ಹೋದೆವು. ನಮಗೆ ಆರ್ಕಿಲಾಜಿಕಲ್ ಡಿಪಾರ್ಟ್ಮೆಂಟ್ ಅವರು ಒಬ್ಬ ಗೈಡನ್ನು ವ್ಯವಸ್ಥೆ ಮಾಡಿದ್ದರು ಅವರು ನಮಗೆ ಸವಿಸ್ತಾರವಾಗಿ ಎಲ್ಲವನ್ನು ಬಹಳ ಸೊಗಸಾಗಿ ಶಿಲ್ಪ ಕಲೆ ಮತ್ತು ಲಕ್ಕುಂಡಿಯ ಅಲ್ಲಿರುವ ದೇವಸ್ಥಾನಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಅಲ್ಲಿಂದ ಊಟ ಮಾಡಿಕೊಂಡು ವೀರನಾರಾಯಣ ಗುಡಿ ಮತ್ತು ತ್ರಿಕೋಟೇಶ್ವರ ಗುಡಿಗಳನ್ನು ನೋಡಿಕೊಂಡು ಧಾರವಾಡಕ್ಕೆ ಹಿಂತಿರುಗಿದೆವು. ಮಕ್ಕಳು ಬಹಳ ಸಂತೋಷ ಪಟ್ಟರು ಮತ್ತು ಬಹಳಷ್ಟು ಇತಿಹಾಸದ ಬಗ್ಗೆ ಕಲಿತರು ನಮಗೂ ಕೂಡ ಬಹಳಷ್ಟು ವಿಷಯಗಳು ತಿಳಿದು ಬಂದವು. ಎಲ್ಲರೂ ಒಂದು ಸಲಿ ನೋಡಲೇಬೇಕಾದಂತ ಸ್ಥಳಗಳು ಅವಾಗಿವೆ.
Independence Day celebration in school
ರಾಜ್ಯೋತ್ಸವದ ಅಂಗವಾಗಿ ಕನ್ನಡ ಹಾಡುಗಳು, ಭಾಷಣ, ರಸಪ್ರಶ್ನೆಇತ್ಯಾದಿ ಕಾರ್ಯಕ್ರಮಗಳು
ಸ್ವಾತಂತ್ರ್ಯ ದಿನದ ಅಂಗವಾಗಿ ಪಾಲಕರಿಗೆ ಚಿತ್ರಕಲೆ ಚಟುವಟಿಕೆಯನ್ನು ಆಯೋಜಿಸಲಾ