ನೆಲ್ಸನ್ ಮಂಡೆಲಾ ಅವರ ಜನ್ಮದಿನದ ಅಂಗವಾಗಿ ಶಾಲೆಯಲ್ಲಿ. ದಕ್ಷಿಣ ಆಫ್ರಿಕಾದಲ್ಲಿ ನೆಲ್ಸನ್ ಮಂಡೆಲಾ ಅವರು ಸಮಾನತೆ, ನ್ಯಾಯ ಮತ್ತು ಮಾನವ ಹಕ್ಕುಗಳಿಗಾಗಿ ನಡೆಸಿದ ಹೋರಾಟ, ವರ್ಣಭೇದ ನೀತಿಯನ್ನು ವಿರೋಧಿಸಿ ತೋರಿದ ಧೈರ್ಯ, ಹಾಗೂ 27 ವರ್ಷಗಳ ಕಾರಾಗೃಹ ಜೀವನದ ಕುರಿತು ಮಕ್ಕಳಿಗೆ ಸಂಜೀವ ಮಾಮಾ ಮಾಹಿತಿಯನ್ನು ನೀಡಿದರು. ನಂತರದಲ್ಲಿ ಅವರ ಜೀವನ ಮತ್ತು ಹೋರಾಟವನ್ನು ಪರಿಚಯಿಸುವ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು ಈ ಕಾರ್ಯಕ್ರಮವು ಮಕ್ಕಳಲ್ಲಿ ಸಾಮಾಜಿಕ ನ್ಯಾಯದ ಕುರಿತು ಜಾಗೃತಿ ಮೂಡಿಸಿತು
ಶಿವಮೊಗ್ಗದಿಂದ ಶ್ರೀ ಮುರಳಿಧರ ಗುಂಗುರು ಮಳೆ ಇವರು ಶಾಲೆಗೆ ಭೇಟಿ ನೀಡಿ "ತಿನ್ನಬಹುದಾದ ಕಳೆಸೊಪ್ಪಿನ ಪರಿಚಯ ಹಾಗೂ ಅದರ ಮಹತ್ವ" ವನ್ನು ತಿಳಿಸಿಕೊಟ್ಟರು . ಇವರು ಪರಿಸರ ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಹೆಚ್ಚು ತಿಳಿದುಕೊಂಡವರು. ಕಳೆದ 15 ವರ್ಷಗಳಿಂದ ಸೂಪ್ಪುಗಳ ಬಗ್ಗೆ ಅಧ್ಯಯನ ಮಾಡಿ ರಾಜ್ಯದ ಬೇರೆಬೇರೆ ಕಡೆ ಸಂಚಾರ ಪ್ರಾರಂಭ ಮಾಡಿ ಇದರ ಬಗ್ಗೆ ಮಾಹಿತಿಯನ್ನು ಕೊಡುತ್ತಿದ್ದಾರೆ. ಸುಮಾರು ೪00 -೫೦೦ ಸೊಪ್ಪುಗಳು ತಿನ್ನಲು ಸಿಗುತ್ತವೆ. ಕನಿಷ್ಠ 50 ರಿಂದ 60 ಸೊಪ್ಪುಗಳನ್ನು ತಂದಿದ್ದರು ಕೆಲವು ಸೊಪ್ಪುಗಳು ನಮ್ಮ ಶಾಲೆಯಲ್ಲಿ ಇವೆ ಎಂದು ವ್ಯಕ್ತಪಡಿಸಿದರು. ಈ ಕಳೆ ಸೊಪ್ಪುಗಳು ತಾವೇ ತಾವಾಗಿ ಹುಟ್ಟಿಕೊಂಡಿರುತ
ರಾಜ್ಯ ಮಟ್ಟದ ಮಲ್ಲಕಂಬ ಕ್ರೀಡೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಸುಮಧುರವಾಗಿ ಪ್ರಾರ್ಥನಾ ಗೀತೆಯನ್ನು ಪ್ರಸ್ತುತಪಡಿಸಿ ಕಾರ್ಯಕ್ರಮದ ಗೌರವವನ್ನು ಹೆಚ್ಚಿಸಿದ ಬಾಲಬಳಗ ಶಾಲೆಯ ವಿದ್ಯಾರ್ಥಿಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಧಾರವಾಡ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಅದ್ಭುತ ಪ್ರದರ್ಶನಕ್ಕೆ ಅಭಿನಂದನೆಗಳು ಹಾಗೂ ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಕೆಗಳು.
To mark the discovery of Raman Effect, February 28th is celebrated as National Science day. On this ocassion, We had displayed more than 16 posters/models by students from 3rd to 9th. Members of Baalabalaga Eco club put up a poster and initiated the collection of entries for the ecological dictionary.The day began with the presentation of a science based drama " Evergreen Revolution" by the students of 9th Standard. Arush and Chirag spoke about two women scientists , Marie Curie and Jane Goodal
ಇಂದು ಚಟುವಟಿಕೆ ತರಗತಿಯಲ್ಲಿ ಮಕ್ಕಳೆಲ್ಲ ಸೇರಿ ಮುಚ್ಚಳಗಳನ್ನು ಬಳಸಿ ಈ ವಿನ್ಯಾಸವನ್ನು ಮಾಡಿದ್ದಾರೆ. ಎಲ್ಲರೂ ಕೂಡಿಕೊಂಡು ಒಂದೇ ವಿನ್ಯಾಸವನ್ನು ಮಾಡುವುದರಿಂದ ಮಕ್ಕಳು ಹೊಂದಾಣಿಕೆಯನ್ನು ಕಲಿಯುತ್ತಾರೆ ಈ ಚಟುವಟಿಕೆಯಿಂದ ಅವರಲ್ಲಿ ಸೃಜನಾತ್ಮಕ ಕಲೆಯನ್ನು ಹೆಚ್ಚಿಸಬಹುದು. ಬೌದ್ಧಿಕ ಬೆಳವಣಿಗೆ ಆಗುತ್ತದೆ.
೫ನೇ ವರ್ಗದ ಮಕ್ಕಳಿಗೆ ಗೌರಿ ಮೌಶಿ ಒರಿಗಾಮಿ ಬಳಸಿ ಆಕೃತಿಗಳನ್ನು ಮಾಡುವುದನ್ನು ಹೇಳಿಕೊಟ್ಟರು.
ಇಂದು ಪ್ರತಿ ವರ್ಷದಂತೆ ಶಾಲೆಯಲ್ಲಿ ಹಣ್ಣಿನ ರಸಾಯನವನ್ನು ಮಾಡಲಾಯಿತು. ಎಲ್ಲ ಮಕ್ಕಳಿಗೆ ಬೇರೆ ಬೇರೆ ಹಣ್ಣನ್ನು ತೆಗೆದುಕೊಂಡು ಬರಲು ಹೇಳಿ,ತಂದಂತಹ ಹಣ್ಣುಗಳನ್ನು ಚಿಕ್ಕ ಮಕ್ಕಳಿಗೆ ತೋರಿಸಿದಾಗ ಮಕ್ಕಳು ಹಣ್ಣುಗಳನ್ನು ಗುರುತಿಸಿದರು. ಹಾಗೂ ದೊಡ್ಡ ಮಕ್ಕಳು ಕೆಲಸ ಮಾಡುವ ರೀತಿಯನ್ನು ನೋಡಿದರು. 9 ನೇ ತರಗತಿಯ ಮಕ್ಕಳು ಹೆಚ್ಚಿನ ಜವಾಬ್ದಾರಿಯಿಂದ ಹಣ್ಣುಗಳನ್ನು ತೊಳೆದು, ಕಟ್ ಮಾಡಿ, ಹಣ್ಣಿನ ರಸಾಯನವನ್ನು ತಯಾರಿಸಿ ಎಲ್ಲ ಮಕ್ಕಳಿಗೂ, ಶಿಕ್ಷಕರಿಗೂ, ಮಕ್ಕಳನ್ನು ಕರೆಯಲು ಬಂದ ಪಾಲಕರಿಗೂ ತಾವೇ ಬಡಿಸಿದರು. ಇದರಿಂದ ಮಕ್ಕಳು ಕೂಡಿ ಕೆಲಸ ಮಾಡುವುದನ್ನು ಕಲಿತರು. ದೈಹಿಕ ಆರೋಗ್ಯದ ದೃಷ್ಟಿಯಿಂದ ಮಾಡಿದ
9ನೇ ತರಗತಿಯ ಮಕ್ಕಳಿಗೆ ತೃತೀಯ ಭಾಷೆ ಹಿಂದಿ ವಿಷಯದ ಪಾಠಕ್ಕೆ ಪೂರಕವಾಗಿ ಸೋಲಾರ್ ಕುಕ್ಕರಿನಲ್ಲಿ "ಅನ್ನ" ಮಾಡಿದೆವು. ಈ ಚಟುವಟಿಕೆಯನ್ನು ಮಾಡಲಾಯಿತು.
ವಿವೇಕಾನಂದ ಕಾಲೇಜಿನಲ್ಲಿ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಗಳಿಸಿ 5000 ರೂ ಬಹುಮಾನ ಪಡೆದಿದ್ದಾರೆ. ಭಾಗವಹಿಸಿದ ಎಲ್ಲ ಮಕ್ಕಳಿಗೂ ಧನ್ಯವಾದಗಳು.
ಜೀವಿಕ ಮೌಲಾನಾ ಅಬುಲ್ ಕಲಾಂ ಅವರ ಬಗ್ಗೆ ಮಾತನಾಡಿದಳು. ಮೌಲಾನಾ ಕಲಾಂ ಅವರ ಕಾಂಗ್ರೆಸ್ ಗೆ ಸೇರ್ಪಡೆ, ಗಾಂಧೀಜಿ ಜೊತೆ ಇದ್ದಂತ ಒಡನಾಟ, ಶಿಕ್ಷಣದಲ್ಲಿ ಅವರು ಮಾಡಿದಂತ ಸಾಧನೆಗಳು ಇತ್ಯಾದಿಗಳ ಬಗ್ಗೆ ಒಂದು ವಿಡಿಯೋ ಮುಖಾಂತರ 8,9,10ನೇ ತರಗತಿ ಮಕ್ಕಳಿಗೆ ತೋರಿಸಲಾಯಿತು.