The celebrations of world environment day 2025 started with a vibrant march, with slogans to stir the enthusiasm in the public around the neighbourhood,for example "forest without trees is like home without children" or "stop plastic save earth" or 'greenery is life ' , etc.As the saying goes ' Its not only for what we do we are responsibe, but for that we do not do'. All along the way, there echoed a chorus of songs dedicated to mother nature and the state of iher due to humans. We walked
21/02/25 ರಂದು ಹಸಿರು ದಳ ಬುಗುರಿ ಸಂಸ್ಥೆ ಅವರು ನಮ್ಮ ಶಾಲೆಯ 3,4 ಮತ್ತು 5ನೇ ತರಗತಿಯ ಮಕ್ಕಳಿಗೆ ಕಲಕೇರಿ ಸಂಗೀತ ವಿದ್ಯಾಲಯದಲ್ಲಿ ರಂಗ ಕಲಾವಿದ ಶಿಕ್ಷಕಿಯಾದ ಶಶಿಕಲಾ ಅವರು ಮಕ್ಕಳಿಗೆ 'ಕನಸಿನ ಹಾರಾಟ' ಎಂಬ ಚಿತ್ರ ಕಥೆಯನ್ನು ಓದಿ ತೋರಿಸಿದರು. ಕಥೆಯನ್ನು ಅವರು ಬಹಳ ಚೆನ್ನಾಗಿ ಹೇಳಿದರು. ಧ್ವನಿಯನ್ನು ವಿಭಿನ್ನ ರೀತಿಯಲ್ಲಿ ಹೇಗೆ ಬಳಸುವುದು, ಮುಖ ಮತ್ತು ಕೈಗಳ ಮೂಲಕ ಹಾವಭಾವ ತೋರಿಸುತ್ತಾ ಗಟ್ಟಿಯಾಗಿ ಹೇಗೆ ಓದಬೇಕೆಂಬುದನ್ನು ಹೇಳಿಕೊಟ್ಟರು. ಕಥೆ ಕೇಳಿದ ನಂತರ ಮಕ್ಕಳಿಗೆ ಅದರ ಬಗ್ಗೆ ಚಿತ್ರ ಮತ್ತು ಕರಕುಶಲತೆ ಮಾಡಲು ಹೇಳಿದರು ಮಕ್ಕಳು ಅಷ್ಟೇ ಆಸಕ್ತಿಯಿಂದ ಈ ಚಟುವಟಿಕೆಯಲ್ಲಿ ಭಾಗವಹಿಸಿದ್ದರು.
2/10/24 ರಂದು ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಇವರುಗಳ ಜಯಂತಿಯನ್ನು ಆಚರಣೆ ಮಾಡಿದೆವು. ಅಂದು ನಡೆದ ಕಾರ್ಯಕ್ರಮಗಳ ವಿವರ ಇಂತಿವೆ. ಮೊದಲು ಕಾರ್ಯಕ್ರಮ ಪ್ರಾರ್ಥನೆ ಯೊಂದಿಗೆ ಪ್ರಾರಂಭವಾಗಿ ಗಾಂಧೀಜಿಯ ನೆಚ್ಚಿನ ಪ್ರಾರ್ಥನೆಯಾದ ಎಲ್ಲರ ನೋವನ್ನು ಬಲ್ಲವನಾದರೆ ಗೆಲ್ಲುವೆ ನೀನು ಬಾಳಲಿ ಎಂಬ ಹಾಡನ್ನು ಎಲ್ಲರೂ ಸೇರಿ ಹಾಡಿದೆವು. ನಂತರ ಶಿಕ್ಷಕರಾದ ವಿದ್ಯಾಶ್ರೀ ಹುಲಿ ಗಾಂಧೀಜಿಯ ಬಗ್ಗೆ ಮತ್ತು ಉಮಾ ಇನಾಮತಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಬಗ್ಗೆ ಮಾತನಾಡಿದರು. ಅಂದಿನ ಅತಿಥಿಗಳಾದ ಶ್ರೀಯುತ ಆನಂದ್ ಕಡುಕೋಳ್ ಅವರು ಶಾಸ್ತ್ರೀಯ ಅವರ ಜೀವನ ನಮ್ಮ ಇಂದಿನ ದಿನಕ್ಕೆ ಹೇಗೆ ಸ್ಪೂರ್ತಿಯಾಗಿದೆ ಎಂದು ಮಾತನಾಡಿದರು.
7th class students playing sitar
೧ನೇ ವರ್ಗದ ಮಕ್ಕಳು ಗಣಪತಿ ಮಾಡುತ್ತಿರುವದು
9th std children visited High Court Dharwad .and observed the court cases and learnt about judicial system
ದಿನಾಂಕ 24 ಮತ್ತು 25/08/2024 ರಂದು ಗಾಂಧಿ ಸ್ಮಾರಕ ನಿಧಿ, ನ್ಯೂ ಡೆಲ್ಲಿ ಇವರು ಬೆಂಗಳೂರಿನಲ್ಲಿ 21ನೇ ಶತಮಾನಕ್ಕೆ ಮಹಾತ್ಮ ಗಾಂಧೀಜಿ.( Mahatma Gandhi ji ಫಾರ್ the 21st century) ಈ ವಿಷಯದ ಮೇಲೆ ವಿಚಾರಗೋಷ್ಠಿಯನ್ನು ಆಯೋಜಿಸಿದ್ದರು. ಈ ಗೋಷ್ಠಿಯಲ್ಲಿ ಸಂಜೀವ್ ಮಾಮಾ ಅವರ ಜೊತೆ 8ನೇ ತರಗತಿಯ ಪವನ್ ಗಣಿ ಮತ್ತು ಅಶುತೋಷ್ ಚರಕ ಪ್ರದರ್ಶನ ನೀಡಿದರು. ಈ ಕಾರ್ಯಕ್ರಮಕ್ಕೆ ಮಹಾತ್ಮ ಗಾಂಧೀಜಿಯವರ ಮರಿ ಮೊಮ್ಮಗ ತುಷಾರ್ ಗಾಂಧಿ ಬಂದಿದ್ದು ವಿಶೇಷ.
ಇಂದು ನಡೆದ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ಮಕ್ಕಳು ಭಾಗವಹಿಸಿ, ಉತ್ತಮ ಪ್ರದರ್ಶನ ನೀಡಿದ್ದಾರೆ.