Navodaya Nagar, Dharwad
Mon - Fri : 10.00 AM - 05.30 PM
0836 244 4467

Activities

Visitor Activities

Education through theatre    ---     15-Jul-2025

ಮೂಲತಹ ಕೇರಳದವರಾದ ಗಾಯತ್ರಿ ಪದ್ಮನಾಭನ ಅವರು Education through theatre ಎಂಬ ವಿಷಯದ ಮೂಲಕ ಏಳರಿಂದ ಹತ್ತನೇ ತರಗತಿ ಮಕ್ಕಳಿಗೆ ಅನೇಕ ಸೂಕ್ಷ್ಮ ವಿಚಾರಗಳನ್ನು ಚಟುವಟಿಕೆಯ ಮೂಲಕ ಮಾಡಿ ಮಕ್ಕಳಿಗೆ ಮನದಟ್ಟ ಮಾಡಿಕೊಟ್ಟರು ಹಿಂಸೆ ,ಸಹಾನುಭೂತಿ ,ಲಿಂಗ ತಾರತಮ್ಯ ,ಲಿಂಗತ್ವ ಎಂಬ ವಿಷಯಗಳನ್ನು ಮಕ್ಕಳೊಡನೆ ಬಹಳ ಮುಕ್ತವಾಗಿ ಮಾತನಾಡಿದರು.ಮಕ್ಕಳು ಸಣ್ಣ ಸಣ್ಣ skit ಗಳ ಮೂಲಕ ತಮ್ಮನ್ನು ತೊಡಗಿಸಿಕೊಂಡರು. ಕೊನೆಗೆ ನಮ್ಮ ಮಕ್ಕಳ ಹಾಡಿಗೆ ಕುಚ್ಚುಪುಡಿ ನೃತ್ಯವನ್ನು ಮಾಡಿ ಮಕ್ಕಳ ಮನೆಗೆದ್ದರು

ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತರ ಯೋಗ ಅಧ್ಯಯನ ವಿಭಾಗದ ವಿದ್ಯಾರ್ಥಿಗಳು ಯೋಗ ತರಬೇತಿ ಶಿಬಿರವನ್ನು ನಡೆಸಿದರು    ---     03-Jul-2025

ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತರ ಯೋಗ ಅಧ್ಯಯನ ವಿಭಾಗದ ವಿದ್ಯಾರ್ಥಿಗಳು ಆರನೇ ತರಗತಿಯ ಮಕ್ಕಳಿಗೆ ಜೂನ್ 25 ರಿಂದ ಜುಲೈ 2 ರ ವರೆಗೆ ಒಂದು ವಾರದ ಯೋಗ ತರಬೇತಿ ಶಿಬಿರವನ್ನು ನಡೆಸಿದರು. ಮಕ್ಕಳಿಗೆ ನಿಧಾನವಾಗಿ, ಸರಿಯಾದ ರೀತಿಯಲ್ಲಿ ಯೋಗಾಸನಗಳನ್ನು ಮಾಡುವುದನ್ನು ಹೇಳಿಕೊಟ್ಟರು. ಮಕ್ಕಳು ಇದರಿಂದ ನಾವು ಹೊಸ ಹೊಸ ಆಸನಗಳ ಹೆಸರನ್ನು ತಿಳಿದುಕೊಂಡೆವು ಎಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಶಿಬಿರಾರ್ಥಿಗಳು ಮಕ್ಕಳಿಗೆ ಯೋಗದ ಬಗ್ಗೆ ತಿಳಿದಿರುವುದರಿಂದ ನಮಗೆ ಕಲಿಸಲು ಕಷ್ಟವಾಗಲಿಲ್ಲ ಮಕ್ಕಳು ಚೆನ್ನಾಗಿ ಮಾಡಿದರು ಎಂದು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ತೇಜು ಮೌಶಿ ಮತ್ತು ರಾಜಶ್ರೀ ಮೌಶಿ ಯೋಗದ ಮಹತ

ವಿಶ್ವ ಸಂಗೀತ ದಿನದ ಆಚರಣೆಯ ನಿಮಿತ್ತ ಬಾಲಬಳಗ ಶಾಲೆಯಲ್ಲಿ ಕಾರ್ಯಕ್ರಮ    ---     02-Jul-2025

ವಿಶ್ವ ಸಂಗೀತ ದಿನದ ಆಚರಣೆಯ ನಿಮಿತ್ತ ಬಾಲಗ ಶಾಲೆಯಲ್ಲಿ ಡಾಕ್ಟರ್ ಶ್ರೀಮತಿ ಸುಮಿತ್ರ ಕಾಡದೇವರ ಮಠ ಅವರು ನಮ್ಮ ಶಾಲೆಗೆ ಮುಖ್ಯ ಅತಿಥಿಗಳಾಗಿ ಬಂದಿದ್ದರು. 28 ಜೂನ್ ರಂದು ನಡೆದ ಈ ಕಾರ್ಯಕ್ರಮ ಬಾಲ ಬಳಗದ ಮಕ್ಕಳು ಮತ್ತು ಮಾಶೀಯರು ಸೇರಿ ಹಾಡಿದ ಹಾಡುಗಳಿಂದ ಪ್ರಾರಂಭವಾಯಿತು. ಸಂಗೀತದ ವಾತಾವರಣ ಗುರುತಿಸಿದ ಸುಮಿತ್ರ ಮೇಡಂ ತಮಗೆ ಈಗ ಗುರುಕುಲದಲ್ಲೇ ಇದ್ದ ತರ ಆಗುತ್ತಿದೆ ಎಂದು ಹೇಳಿದರು. ನಂತರ ಸುಮಿತ್ರ ಮೇಡಂ ಮಾತನಾಡಿ ಪ್ರತಿಭಾಮೌಷಿಯ ಜೊತೆ ಅವರು ಕಳೆದ ಬಾಲ್ಯದ ಬಗ್ಗೆ ನಮಗೆಲ್ಲರಿಗೂ ಹೇಳಿದರು. ಮೊದಲಿಗೆ ಅವರು ಮ್ಯೂಸಿಕ್ ಎಂಬ ಶಬ್ದದ ಅಬ್ರಿವೇಶನ್ ಬಿಡಿಸಿ ಹೇಳಿದರು. ಮೊರಲಿಟಿ, ಯೂನಿವರ್ ಸಲಿಟಿ, ಸ್ಪಿರಿಚುಯಾಲಿಟಿ,

Discussion with Police Commissioner, Hubli Dharwad City    ---     11-Jan-2025

ಇಂದು ಸಂಜೆ ಧಿಡೀರ್ ಆಗಿ ಹು-ಧಾ ಪೊಲೀಸ್ ಕಮಿಶನರ್ ಆಗಿರುವ ಶ್ರೀ ಶಶಿಕುಮಾರ್ ಅವರು ಶಾಲೆಯನ್ನು ನೋಡುವ ಸಲುವಾಗಿ ಭೇಟಿ ನೀಡಿದರು. ನಮ್ಮ ಹುಡುಗರಿಗೆಲ್ಲ ಖುಶಿಯೋ ಖುಶಿ. ಶಾಲೆಯ ಬಗ್ಗೆ ಕೆಲ ಸಂಗತಿಗಳನ್ನು ನಾನು ಹೇಳುವಾಗ ಅವರು ಮಕ್ಕಳಿಂದ ಏನಾದರೂ ಚಟುವಟಿಕೆ ಮಾಡಿಸಿ ಅಂದರು..ಹಾಡು ನಮಗೆ ಸರಳ. ಹಾಡುತ್ತೀರಾ ಎಂದು ಮಕ್ಕಳಿಗೆ ಕೇಳಿದಾಗ ಎಲ್ಲರೂ ವೇದಿಕೆಗೆ ಓಡಿಯೇ ಬಿಟ್ಟರು. ' ಎಲ್ಲರ ನೋವನು ' ಹಾಡನ್ನು ಹಾಡಿದರು. ವೇದಿಕೆಯ ಮುಂದೆ ಕುಳಿತ ಪ್ರೌಢಶಾಲೆಯ ಮಕ್ಕಳು ಕೂಡ ಧ್ವನಿ ಕೂಡಿಸಿದರು. ಹಾಡು ಅವರಿಗೆ ಖುಶಿ ನೀಡಿತು. ಆಮೇಲೆ ಉಳಿದ ದೊಡ್ಡ ಮಕ್ಕಳೊಡನೆ ಮುಕ್ತವಾಗಿ ಮಾತನಾಡಿ ಅಭ್ಯಾಸದ ಮಹತ್ವ, ಗುರಿಗಳ ಬಗ್ಗೆ ಬ

ಧಾರವಾಡ ಆಕಾಶವಾಣಿ ಕೇಂದ್ರದ ನಿವೃತ್ತ ನಿರ್ದೇಶಕರಾದ ಸಿ. ಯು. ಬೆಳ್ಳಕ್ಕಿ    ---     11-Jan-2025

ನಮ್ಮ ಧಾರವಾಡ ಆಕಾಶವಾಣಿ ಕೇಂದ್ರದ ನಿವೃತ್ತ ನಿರ್ದೇಶಕರಾದ ಸಿ. ಯು. ಬೆಳ್ಳಕ್ಕಿ ಅವರು ಮಂಗಳವಾರ 8/1ರಂದು ಶಾಲೆಗೆ ಆಗಮಿಸಿ , ನಮ್ಮ ಶಾಲೆಯನ್ನು ವೀಕ್ಷಿಸಿ ಮೆಚ್ಚುಗೆ ಸೂಚಿಸಿದರು.