Navodaya Nagar, Dharwad
Mon - Fri : 10.00 AM - 05.30 PM
0836 244 4467

Activities

Teacher Activities

ಹೊರಸಂಚಾರ    ---     25-Aug-2026

ಇಂದು ಹೊರಸಂಚಾರಕ್ಕೆ ಒಂದು ಎರಡು ಮತ್ತು ಮೂರನೇ ತರಗತಿಯ ಮಕ್ಕಳನ್ನು ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದೇವು. ಅಲ್ಲಿ ಹಳೆಯ ಕಾಲದಲ್ಲಿ ಉಪಯೋಗಿಸುತ್ತಿದ್ದ ಪಾತ್ರೆಗಳನ್ನು ಮತ್ತು ಅವರು ಧರಿಸಿರುವ ಬಟ್ಟೆಗಳನ್ನು ನೋಡಿ ವಿಷಯಗಳನ್ನು ತಿಳಿದುಕೊಂಡರು. ಸಂಗೀತ ವಾದ್ಯಗಳನ್ನು ನೋಡಿ ಖುಷಿಪಟ್ಟರು. ಮಕ್ಕಳು ಬಣ್ಣ ಮತ್ತು ಆಕಾರಗಳನ್ನು ಗುರುತಿಸುವುದು ವಸ್ತುಗಳನ್ನು ಗಮನಿಸುವುದನ್ನು ಕಲಿತರು. ಹಾಗೆ ಪಂಚೇಂದ್ರಿಯಗಳು ಯಾವುವು ? ಎಂದು ಅರ್ಥ ಮಾಡಿಕೊಂಡರು . ಮೋಜಿನ ಆಟಗಳನ್ನು ಬಹಳ ಖುಷಿಯಿಂದ ಆಡಿದರು.

Entomology and Aracnology workshop    ---     25-Aug-2026

On 22nd and 23rd I attended , along with students from 10th std,workshop conducted by Dharwad Nature Center, Nature first eco village and mindwave edu hub about insects and spiders . It was conducted by experts from Entomon Institute, Pune Ishan Pahade and.Atharva Kulakarni. This workshop was really eye-opening and very intetrsting and informative. We went on 3 treks in 2 days and saw and identified insects and spiders we have never before seen

ಪುಷ್ಪ ರಾಗ ಪಾಠಕ್ಕೆ ಸಂಬಂಧಿಸಿದಂತೆ ಚಟುವಟಿಕೆ    ---     24-Aug-2026

ಪುಷ್ಪ ರಾಗ ಪಾಠಕ್ಕೆ ಸಂಬಂಧಿಸಿದಂತೆ ಮಕ್ಕಳಿಗೆ ಶಾಲೆಯಲ್ಲಿರುವ ಹೂಗಳ ಪರಿಚಯವನ್ನು ಮಾಡಿಸಲಾಯಿತು. ಹಾಗೂ ಬಗೆ ಬಗೆಯ ರೀತಿಯ ಹೂಗಳನ್ನು ಬಳಸಿಕೊಂಡು ಗ್ರಂಥಾಲಯದಲ್ಲಿ ರಂಗೋಲಿಯನ್ನು ಹಾಕುವ ಚಟುವಟಿಕೆಯನ್ನು ಮಾಡಿದರು.

February 28th is celebrated as National Science day    ---     03-Mar-2026

To mark the discovery of Raman Effect, February 28th is celebrated as National Science day. On this ocassion, We had displayed more than 16 posters/models by students from 3rd to 9th. Members of Baalabalaga Eco club put up a poster and initiated the collection of entries for the ecological dictionary.The day began with the presentation of a science based drama " Evergreen Revolution" by the students of 9th Standard. Arush and Chirag spoke about two women scientists , Marie Curie and Jane Goodal

26 ಜನವರಿ ಗಣರಾಜ್ಯೋತ್ಸವ    ---     30-Jan-2026

26 ಜನವರಿ ಗಣರಾಜ್ಯೋತ್ಸವ ನಮ್ಮ ದೇಶದ ರಾಷ್ಟ್ರೀಯ ಹಬ್ಬ. ಆದರೆ ಈ ದಿವಸ ನಾವು ನಮ್ಮ ಕುಟುಂಬದ ಜೊತೆ ಸಮಯ ಕಳೆಯುವುದು ಒಂದು ವಾಡಿಕೆ ಆಗಿದೆ. ಇದು ಸರಿಯೇ?? ರಾಷ್ಟ್ರೀಯ ಹಬ್ಬದ ದಿನ ರಜೆ ಕೊಡುವುದು ಸೂಕ್ತವೇ. ಸ್ವಾತಂತ್ರ್ಯ ಎಂದರೇನು. ಈ ವಿಷಯಗಳು ಮೇಲೆ 26ರಂದು 9ನೇ ತರಗತಿ ಮಕ್ಕಳ ಜೊತೆ ಸಂಜೀವ ಮಾಮ ಚರ್ಚೆಯನ್ನು ಮಾಡಿದರು. ದೇಶದ ನಾಗರೀಕರಾದ ನಾವು ಈ ಎಲ್ಲಾ ಹಬ್ಬವನ್ನು ಬಹಳ ಜವಾಬ್ದಾರಿಯಿಂದ ಮತ್ತು ಉಪಯುಕ್ತವಾಗಿ ಆಚರಣೆ ಮಾಡಬೇಕು. ಈ ದಿವಸ ನಾವು ದೇಶದ ಬಗ್ಗೆ ಚಿಂತನೆ ಮಾಡಬೇಕು. ಸ್ವಾತಂತ್ರ್ಯತೆಯನ್ನು ಹೇಗೆ ಸರಿಯಾಗಿ ಬಳಕೆ ಮಾಡಬೇಕು. ರಾಜರ ಆಳ್ವಿಕೆಗೂ ಮತ್ತು ಪ್ರಜಾಪ್ರಭುತ್ವಕ್ಕೂ ಇರುವಂತ ವ್ಯತ್ಯಾಸ ರಾಜ್ಯರು

Science lab activity    ---     18-Dec-2025

3ನೇ ತರಗತಿಯ ಗ್ರಂಥಾಲಯ ತರಗತಿಯಲ್ಲಿ ಸಸ್ಯಗಳು ಮತ್ತು ಪ್ರಾಣಿಗಳ ಬಗ್ಗೆ ಓದುತ್ತಿರುವಾಗ ಸೂಕ್ಷ ಜೀವಿಗಳ ಬಗ್ಗೆ ಚರ್ಚೆ ಮಾಡಿದ್ದೆವು. ಯಾವುದಾದರೂ ಒಂದು ತರಗತಿಯಲ್ಲಿ ವಿಜ್ಞಾನ ಪ್ರಯೋಗಾಲಯದಲ್ಲಿ ಸೂಕ್ಷ್ಮ ದರ್ಷಕ ಯಂತ್ರದ ಮೂಲಕ ಏನಾದರೂ ನೋಡೋಣ ಎಂದು ನಿರ್ಧಾರ ಮಾಡಿದ್ದೇವು. ಮೊನ್ನೆ ವಿಜ್ಞಾನ ಶಿಕ್ಷಕರಾದ ವಿಜಯಲಕ್ಷ್ಮಿ ಮೌಶಿ ಅವರು ಮಕ್ಕಳಿಗೆ ಮೊಸರು, ಕೆಸರು ನೀರಿನಲ್ಲಿ ಇರುವ ಸೂಕ್ಷ್ಮ ಜೀವಿಗಳನ್ನು ತೋರಿಸಿದರು. ಮಕ್ಕಳು ತಾವು ನೋಡಿದ್ದನ್ನು ಬೋರ್ಡಿನ ಮೇಲೆ ಚಿತ್ರ ಬಿಡಿಸಿದರು. ಈ ಚಟುವಟಿಕೆಯಲ್ಲಿ ಮಕ್ಕಳು ತುಂಬಾ ಆಸಕ್ತಿಯಿಂದ ಪಾಲ್ಗೊಂಡಿದ್ದರು.

ದ್ವಿತೀಯ ಸ್ಥಾನ ಪ್ರಾಥಮಿಕ ವಿಭಾಗ    ---     03-Dec-2025

ದಿನಾಂಕ 2 /12/25 ರಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಾರ್ಯಾಲಯ ಧಾರವಾಡ ಶಹರ ವಲಯ ಇದರ ಅಡಿಯಲ್ಲಿ 2025--26 ನೇ ಸಾಲಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗಾಗಿ ಸಹಪಠ್ಯ ಚಟುವಟಿಕೆಗಳು ನಡೆದವು.ಅದರಲ್ಲಿ ಬಾಲಬಳಗ ಶಾಲೆಯ ಚಿತ್ರಕಲಾ ಶಿಕ್ಷಕರಾದ ರೂಪಾ ಕಮ್ಮಾರ ಇವರು ಭಾಗವಹಿಸಿ ಪ್ರಾಥಮಿಕ ವಿಭಾಗದ ಚಿತ್ರಕಲೆಯಲ್ಲಿ ದ್ವಿತೀಯ ಬಹುಮಾನವನ್ನು ಗಳಿಸಿದ್ದಾರೆ

ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ    ---     12-Nov-2025

ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ --ನಾಡಗೀತೆ--ಅರ್ಥ, ಕರ್ನಾಟಕ ರಸಪ್ರಶ್ನೆ ಕಾರ್ಯಕ್ರಮ, ಕನ್ನಡ ನಾಡು -ನುಡಿಯ ಗೀತೆಗಳು 4ನೇ ವರ್ಗದ ಮಕ್ಕಳು ಉತ್ತಮ ರೀತಿಯಲ್ಲಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. 6&7ನೇ ವರ್ಗದ ಮಕ್ಕಳು ರಸಪ್ರಶ್ನೆಯಲ್ಲಿ ಭಾಗವಹಿಸಿ ಆನಂದಿಸಿದರು. ಸಂಗೀತ ವರ್ಗದ ಮಕ್ಕಳು ವಿಶೇಷವಾಗಿ ಹಾಡುಗಳನ್ನು ಪ್ರಸ್ತುತಪಡಿಸಿದರು. ಕೊನೆಯಲ್ಲಿ ಎಲ್ಲ ಮಕ್ಕಳು, ಶಿಕ್ಷಕರು ಸೇರಿ ಕನ್ನಡದ ಹಾಡುಗಳನ್ನು ಹಾಡಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು

educational trip to the Water and Land Management    ---     04-Nov-2025

On Friday the 31st October 2025, students of 6th and 7th standard were taken on an educational trip to the Water and Land Management Institute(WALMI) Dharwad. This is a central government institute which is present in 16 cities all over India, Dharwad being one of them. The director of the institute Engineer Bandiwaddar spoke to the students and told the different functions carried out by the WALMI Institute Chiefly this Institute is involved in research and training of different land and wate

ಹೊರ ಸಂಚಾರ    ---     03-Nov-2025

9ನೇ ತರಗತಿ ಮಕ್ಕಳನ್ನು ಹೊರ ಸಂಚಾರಕ್ಕೆಂದು ಗಜೇಂದ್ರಗಡಕ್ಕೆ ಕರೆದುಕೊಂಡು ಹೋಗಿದ್ದೆವು. ಕಾಲಕಾಲೇಶ್ವರ ದೇವಸ್ಥಾನ, ಶಿವಾಜಿ ಕಟ್ಟಿಸಿದ ಕೋಟೆಗಳನ್ನು ವೀಕ್ಷಿಸಿದವು. ನಾವು ಗಜೇಂದ್ರಗಡದ ದೊರೆಯಾದ ಶ್ರೀಮಂತ ಯಶ್ ರಾಜ್ ಗೋಡ್ಪಡೆ ಇವರನ್ನು ಭೇಟಿ ಮಾಡಿದವು, ಅವರು ಮಕ್ಕಳ ಜೊತೆ ಬಹಳ ಸೊಗಸಾಗಿ ತಮ್ಮ ಇತಿಹಾಸ,ಮನೆತನದ ಬಗ್ಗೆ ಚರ್ಚೆ ಮಾಡಿದರ.