ನಮ್ಮ ಶಾಲೆಯ ಹಳೆಯ ವಿದ್ಯಾರ್ಥಿಯಾದ ಮಿಂಚು ಕುಲಕರ್ಣಿ ತನ್ನ ಹಚ್ಚಿನ ವ್ಯಾಸಂಗವನ್ನು (U.S) Washington University ಯಲ್ಲಿ ಮುಗಿಸಿ ಅಲ್ಲಯೇ ಉದ್ಯೋಗವನ್ನು ಮುಂದುವರಿಸಿದ್ದಾನೆ .ಈ ಸಲ ಧಾರವಾಡಕ್ಕೆ ಬಂದಾಗ ಶಾಲೆಗೆ ಭೆಟಿಕೊಟ್ಟು 8,9,10 ನೇ ತರಗತಿಯ ಮಕ್ಕಳ ಜೊತೆ ತಾನು ಕಲಿತ ಬಗ್ಗೆ ವಿಷಯ ಪ್ರಸ್ತುತಿ ಎಂದರೇನು? ಮಾನವ ಯಂತ್ರದ ಜೋತೆಗೆ ಹೇಗೆ ವ್ಯವಹರಿಸುತ್ತಾ ಬಂದಿದ್ದಾನೆ ಮಾನವ ತನ್ನ ಕೆಲಸಗಳನ್ನು ಬಹಳ ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಮಾಡಲು ಯಂತ್ರಗಳನ್ನು ಮತ್ತು ಅದರ ಜೋತೆ ತಂತ್ರಾಂಶವನ್ನು ವೇಗವಾಗಿ ಮಾರ್ಪಾಡುಮಾಡುತ್ತಿದ್ದಾನೆ, ಎಂಬುದರ ಬಗ್ಗೆ ತಿಳಿಸಿಕೊಟ್ಟನು.